top of page
Search

ಟಿಸಿಇ, ಗದಗನಲ್ಲಿ ನವೀಕೃತ ಆಧುನಿಕ ಸ್ಮಾರ್ಟ್ ರೆಫರೆನ್ಸ್ ಮತ್ತು ಲರ್ನಿಂಗ್ ಸೆಂಟರ್ ಉದ್ಘಾಟನೆ

  • Writer: Manjunath Uttarkar
    Manjunath Uttarkar
  • Jun 22
  • 1 min read
ಟಿಸಿಇ, ಗದಗನಲ್ಲಿ ನವೀಕೃತ ಆಧುನಿಕ ಸ್ಮಾರ್ಟ್ ರೆಫರೆನ್ಸ್ ಮತ್ತು ಲರ್ನಿಂಗ್ ಸೆಂಟರ್ ಉದ್ಘಾಟನೆ
ಟಿಸಿಇ, ಗದಗನಲ್ಲಿ ನವೀಕೃತ ಆಧುನಿಕ ಸ್ಮಾರ್ಟ್ ರೆಫರೆನ್ಸ್ ಮತ್ತು ಲರ್ನಿಂಗ್ ಸೆಂಟರ್ ಉದ್ಘಾಟನೆ

ಗದಗ, ಜೂನ್ 17: ನಗರದ ಟೊಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಟಿಸಿಇ) ಕೇಂದ್ರ ಗ್ರಂಥಾಲಯದಲ್ಲಿ ನವೀಕರಿಸಲಾದ ಆಧುನಿಕ ಸ್ಮಾರ್ಟ್ ರೆಫರೆನ್ಸ್ ಮತ್ತು ಲರ್ನಿಂಗ್ ಸೆಂಟರ್ ಅನ್ನು ಬುಧವಾರ ವಿಝೃಂಭಣೆಯಿಂದ ಉದ್ಘಾಟಿಸಲಾಯಿತು.

ಕಾರ್ಯಕ್ರಮವು ಪರಮಪೂಜ್ಯ ಡಾ. ಟೊಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಹಾಗೂ ಡಾ. ಟೊಂಟದ ಸಿದ್ಧರಾಮ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಹಾಗೂ ಬೈರನಹಟ್ಟಿ, ಶಿರೋಳದ ಪರಮಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸೋಮರಾಯ ಬಿ. ತಲ್ಲೊಳ್ಳಿ, ವಿಶ್ವವಿದ್ಯಾಲಯ ಗ್ರಂಥಪಾಲಕರು, ವಿಟಿಯು, ಬೆಳಗಾವಿ ಹಾಗೂ ಡಾ. ರಾಜಕುಮಾರ ವಿ. ರಾಯ್ಕರ, ನಿವೃತ್ತ ಪ್ರಾಧ್ಯಾಪಕರು, ಕೆಎಲ್‌ಇ ಡಾ. ಎಮ್.‌ ಎಸ್. ಶೆಶಗಿರಿ ಕಾಲೇಜ್ ಆಫ್‌ ಇಂಜಿನೀಯರಿಂಗ್‌ ಮತ್ತು ಟೆಕ್ನಾಲಜಿ, ಬೆಳಗಾವಿ ಯವರು ಭಾಗವಹಿಸಿ ಮಾತನಾಡಿದರು. ಆಧುನಿಕ ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿ, ಸಂಶೋಧನೆ ಮತ್ತು ವೃತ್ತಿ ಸಿದ್ಧತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಡಾ. ಬಸವರಾಜ ಕುಂಬಾರ, ಗ್ರಂಥಪಾಲಕರು, ಜಿಐಟಿ, ಬೆಳಗಾವಿ ಯವರು ಭಾಗವಹಿಸಿದ್ದರು.

ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದ ಶ್ರೀ ಎಸ್. ಎಸ್. ಪಟ್ಟಣಶೆಟ್ಟರ್, ಕಾರ್ಯದರ್ಶಿಗಳು, ಎಸ್‌ಟಿಎಸ್‌ಕೆಕೆ, ಗದಗ ಅವರು ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಗೆ ಗ್ರಂಥಾಲಯದ ಕೊಡುಗೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಂ. ಅವಟಿ ಅವರು ಮಾತನಾಡಿ, ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ, ಸಂಶೋಧನಾ ಚಟುವಟಿಕೆಗಳು ಹಾಗೂ ಸ್ವಯಂ ಅಧ್ಯಯನಕ್ಕೆ ಅನುಕೂಲವಾಗುವಂತೆ ಸ್ಮಾರ್ಟ್ ರೆಫರೆನ್ಸ್ ಮತ್ತು ಲರ್ನಿಂಗ್ ಸೆಂಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಕಾಲೇಜಿನ ಗ್ರಂಥಪಾಲಕರಾದ ಡಾ. ಮಂಜುನಾಥ ಉತ್ತರಕರ ಸ್ವಾಗತಿಸಿ, ಕೇಂದ್ರದ ಉದ್ದೇಶ ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಮಿತಿ ಅಧ್ಯಕ್ಷ ಪ್ರೊ. ಸುನೀಲ ಎಸ್. ಪಾಟೀಲ, ಸಂಯೋಜಕ ಡಾ. ಇರಣ್ಣ ಕೆ., ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕುಮಾರಿ ಮಾನ್ಯಾ ಶೆಟ್ಟಿ ನಿರುಪಿಸಿದರು.

 


 
 
 

Comments


download.png
bottom of page